Saturday, January 16, 2010

ಚಂದ್ರ

ನೋಡ
ನೋಡುತ್ತಿದ್ದಂತೆ ಇರುಳಾಗಿದೆ.
ಚಂದ್ರ ಸಪ್ಪೆಮೋರೆ
ಹಾಕಿಕೊಂಡು ಕಾಣಿಸಿಕೊಂಡ.
ಅವನ ಸುಳಿವೇ ಇಲ್ಲ.
ಸೌಗಂಧಿಕಾದ ಪರಿಮಳ
ತಣ್ಣನೆಯ ಗಾಳಿ, ಪಟಪಟಿಸುವ ರೆಕ್ಕೆ,
ಮಿಟುಕಿಸದೇ ದಿಟ್ಟಿಸುವ ಕಣ್ಣು
ಅವನು ಬರದ ಹಾದಿ.
ಬೆಳದಿಂಗಳೂ ಕಂಬನಿಯನ್ನು
ಒಣಗಿಸುತ್ತದೆ ಎಂದು
ದೇವರಾಣೆಗೂ ಗೊತ್ತಿರಲಿಲ್ಲ.

4 comments:

Anonymous said...

hi

ಮಾ.ಸು.ಮಂಜುನಾಥ said...

ತುಂಬಾ ಚೆನ್ನಾಗಿದೆ ಸಾರ್,"ಮಿಟುಕಿಸದೇ ದಿಟ್ಟಿಸುವ ಕಣ್ಣು
ಅವನು ಬರದ ಹಾದಿ." ನನಗಿಷ್ಟವಾದ ಸಾಲುಗಳು.

ಆನಂದ said...

ಸಖತ್ತಾಗಿದೆ ಸರ್

ಸಂದೀಪ್ ಕಾಮತ್ said...

:)